ಎಲ್ಲರನ್ನೂ ಬೆಳೆಸುವ ಗುಣವಿರಲಿ - ದ್ರೇಹಾಚಾರ್

ಎಲ್ಲರನ್ನೂ ಬೆಳೆಸುವ ಗುಣವಿರಲಿ - ದ್ರೇಹಾಚಾರ್

ಮಧುಗಿರಿ = ವ್ಯಕ್ತಿ ತಾನು ಮಾತ್ರ ಬದುಕಿದರೆ ಸಾಲದು. ತನ್ನವರ ಏಳ್ಗೆಯಲ್ಲಿ ಸಂತಸವ ಕಾಣುವವನು ಮಾತ್ರ ಸಾಮಾಜಿಕ ಹರಿಕಾರನಾಗಬಲ್ಲ ಎಂದು ಡಾ.ಅಮರಾವತಿ ದ್ರೇಹಾಚಾರ್ ತಿಳಿಸಿದರು.

ವಿಶ್ವ ಶಂಕರ ಫೌಂಡೇಶನ್ ವತಿಯಿಂದ ಕಾಳಿಕಾ ಕಮಠೇಶ್ವರ ಸ್ವಾಮಿಗೆ ನಡೆದ ಬೆಳದಿಂಗಳ ಹುಣ್ಣಿಮೆಯ ಪೂಜಾ ಸತ್ಸಂಗದಲ್ಲಿ ಮಾತನಾಡಿದ ಅವರು ವ್ಯಕ್ತಿ ಏಕಮುಖಿಯಾದಾಗ ಸ್ವಾರ್ಥ ಬೆನ್ನು ಹತ್ತುತ್ತದೆ. ಆದರೆ ಬಹುಮುಖಿ ಆಯಾಮದಲ್ಲಿ ಚಿಂಥನೆ ಮಾಡಿದಾಗ ಸಮಾಜದಲ್ಲಿ ಎಲ್ಲರನ್ನೂ ಗೌರವಿಸುವ ಗುಣ ಬರುತ್ತದೆ. ದೃಷ್ಟಿ ಮತ್ತು ನೋಟದಲ್ಲಿ ತುಂಬಾ ವ್ಯತ್ಯಾಸವಿದೆ. ದೃಷ್ಟಿ ಸ್ಥಿರವಾಗಿದ್ದು ನೋಟದಲ್ಲಿ ವ್ಯತ್ಯಯವಾದಾಗ ಸಮಾನತೆಯು ಸಾಕಾರ ವಾಗುವುದಿಲ್ಲ. ಕ್ರಿಯಾಶೀಲತೆ ತನ್ನನ್ನು ಮಾತ್ರ ಮುನ್ನೆಲೆಗೆ ತಂದರೆ ಸಾಲದು ಸಮೂಹವೇ ಮುನ್ನೆಲೆಯ ಪಥದಲ್ಲಿ ಸಾಗುವಂತೆ ಮಾಡಿದಾಗ ಮಾತ್ರ ಈ ಸಮಾಜದಲ್ಲಿ ಗುರಿಯ ಫಲಿತವನ್ನು ಕಾಣಬಹುದು ಎಂದ ಅವರು ಸಮಾಜ ಮತ್ತು ಸಾಗರ ಎರಡೂ ಒಂದೇ. ಸಮಾಜದಲ್ಲಿ ಬದುಕಲು ಭಾವಗಳ ಜೊತೆಗೆ ಕ್ರಿಯಾಶೀಲತೆ ಅತ್ಯಗತ್ಯ. ಸಾಗರದಲ್ಲಿ ಈಜಲು ಸದೃಢ ಮನಸ್ಸು ಮತ್ತು ಸದೃಢ ಶರೀರವೂ ಬೇಕು. ಸಮಾಜ ಎಲ್ಲವೂ ನಮಗೆ ನೀಡಿದೆ. ಅತಿ ಮಾಡಿಕೊಂಡಾಗ ಕೊನೆಗೆ ನಾವು ಗತಿಹೀನರಾಗಬೇಕಾಗುತ್ತದೆಂದು ನುಡಿದರು.

ಇದೇ ಸಂದರ್ಭದಲ್ಲಿ ಹಿರಿಯರಾದ ನರಸಿಂಹರಾಜಾಚಾರ್ ಹಾಗೂ ಪುಟ್ಟರಂಗಮ್ಮ ರವರನ್ನು ಗೌರವಿಸಿ ಭಕ್ತಿ ಸಮಪಿ೯ಸಲಾಯಿತು.

ವೇ.ಬ್ರ.ದೊಡ್ಡೇರಿ ಸಾಯಿ ಪ್ರಸಾದ್, ಶ್ರಧರಾಚಾರ್, ಶಶಾಂಕ್, ಶ್ರೀದೇವಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಾದೇನಹಳ್ಳಿ ಶಿವಕುಮಾರ್, ಹಳೇಹಟ್ಟಿ ಶ್ರೀನಿವಾಸ್, ಪವನ್, ದೊಡ್ಡೇರಿ ಚಂದ್ರಾಚಾರ್, ನರಹರಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.